Thursday, 30 October 2014

ಕಲ್ಲು

ನಿಜ ಗೆಳತಿ ನೀ
ಅಂದಿದ್ದು
ನನ್ನ ಹೃದಯ
ಕಲ್ಲು

ಬಹುಶಃ
ಶಹಜಾನ್ನಿದ್ದು
ಇರಬೇಕು

ಅದಕ್ಕೆ
ಇಂದಿಗೂ
ಭದ್ರವಾಗಿದೆ ತಾಜ್
ಮಹಲ್ಲು

Sunday, 4 August 2013

ನೀನಿಲ್ಲದ ಹೊತ್ತು

ನೀನಿಲ್ಲದ
ಹೊತ್ತು
ನಿದಿರೆಗೂ
ಕುತ್ತು

ಮುನಿಸು ಬಿಡು
ಚಿನ್ನ
ಜೀವ ನೀ
ನನ್ನ

ದೂರಾದರೆ ನೀ
ನನ್ನಿಂದ
ಹನಿ ಜಾರುವುದು
ಕಣ್ಣಿಂದ

ದಿನ ನಿನ್ನ
ನೆನಪಲ್ಲೇ
ಕೊರಗುತಿರುವೆ
ನಲ್ಲೇ

ಬದುಕಲಾರೆ
ನಿನ್ನ ಮರೆತು
ಇನ್ನಾದರು ನಡೆ
ನನ್ನ ಅರಿತು...

                                      - ನಾಗರಾಜ್ ಹೆಬ್ಬಾರ್.

Wednesday, 31 July 2013

ಹಾಡುಪಾಡು

ಮನಸ್ಸಿಗೆ ತೋಚಿದ್ದನ್ನು ಗೀಚಲು ಸೃಷ್ಟಿಸಿಕೊಂಡಿದ್ದು...